ಲೋಕಸೇವಾ ಪ್ರತಿಷ್ಠಾನವು (ಲೋ.ಸೇ.ಪ್ರ.) ಒಂದು ನೋಂದಾಯಿತ ಟ್ರಸ್ಟ್ ಆಗಿದ್ದು, 2011 ನೇ ಇಸವಿಯಿಂದ ಗ್ರಾಮ ವಿಕಾಸಕ್ಕಾಗಿ ವಿವಿಧ ಸೇವಾ ಕಾರ್ಯಗಳನ್ನು ಗ್ರಾಮಗಳಲ್ಲಿ ನಡೆಸುತ್ತಾ ಬಂದಿದೆ. ಗ್ರಾಮದ ಜ್ವಲಂತ ವಿಚಾರಗಳ ಬಗ್ಗೆ ಜನಜಾಗೃತಿಯನ್ನು ಮಾಡುತ್ತಾ, ಗ್ರಾಮಸ್ಥರು ಒಟ್ಟಾಗಿ ತಾವೇ ಪರಿಹಾರ ಉಪಾಯಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸುತ್ತಿದೆ. ಗ್ರಾಮದ ಯುವ ಮನಗಳಲ್ಲಿ ಮೌಲ್ಯಯುತ ಚಿಂತನೆ, ಜನಜೀವನದಲ್ಲಿ ಸಮೃದ್ಧಿ ಹಾಗೂ ನೆಮ್ಮದಿ ತರುವುದೇ ನಮ್ಮ ಧ್ಯೇಯವಾಗಿದೆ
ಭಾರತ ಗ್ರಾಮಗಳ ದೇಶ. ನಮ್ಮ ಗ್ರಾಮಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪರಂಪರೆ ಇದೆ. ಸಂಸ್ಕೃತಿಯನ್ನು ಪೋಷಿಸುತ್ತಾ ಪರಿಸರವನ್ನು ರಕ್ಷಿಸುತ್ತಾ ಸರಳ ಸಮೃದ್ಧ , ಸಭ್ಯ ಜೀವನ ನಡೆಸುವ ಗ್ರಾಮಗಳು ದೇಶದ ಬೆನ್ನೆಲುಬಾಗಿವೆ. ಇಡೀ ದೇಶಕ್ಕೆ ಆಹಾರವನ್ನು ನೀಡುತ್ತಿರುವ ಹಳ್ಳಿಗಳು ದೇಶದ ಆರ್ಥಿಕ ಸ್ವಾವಲಂಬನೆಯ ಮೂಲಾಧಾರವಾಗಿವೆ. ಜನಪದ ವೈಭವದ, ಶ್ರಮ ಸಂಸ್ಕೃತಿಯ, ಸಂಪ್ರದಾಯ ವೈವಿಧ್ಯಗಳ ಸುಂದರ ಪ್ರತೀಕ ಹಾಗೂ ವಿಕೇಂದ್ರಿತ ಸಮಾಜ ಸಂರಚನೆಯ ಘಟಕಗಳಾಗಿವೆ ನಮ್ಮ ಗ್ರಾಮಗಳು. ಸ್ವಾವಲಂಬನೆಗಾಗಿ ಪರಸ್ಪರಾವಲಂಬನೆ ಇದು ಗ್ರಾಮಗಳ ಅಂತಃಸತ್ವವಾಗಿದೆ.
ಇಂದಿನ ವಿದ್ಯಾಬ್ಯಾಸ - ಆರೋಗ್ಯ ಹಾಗೂ ಉದ್ಯೋಗ ವ್ಯವಸ್ಥೆಗಳು ಗ್ರಾಮದ ಜನರನ್ನು ನಗರದ ಕಡೆ ಆಕರ್ಷಿಸುತ್ತಿದೆ. ನೀರಿನ ಕೊರತೆ, ಹವಾಮಾನ ವೈಪರಿತ್ಯ, ಬೆಳೆಗೆ ಸಿಗದ ಮೌಲ್ಯ, ಬಂಜರಾಗುತ್ತಿರುವ ಭೂಮಿ, ಹಳ್ಳಿಗಳಿಗೆ ಪ್ರವೇಶಿಸುತ್ತಿರುವ ಕಾಡುಪ್ರಾಣಿಗಳು, ಕುಟುಂಬ ವಿಭಜನೆಯಾಗಿ ಚಿಕ್ಕದಾಗುತ್ತಿರುವ ಕೃಷಿಭೂಮಿ - ಇವೆಲ್ಲ ರೈತನ ಬದುಕಿನ ತಲ್ಲಣವನ್ನು ಹೆಚ್ಚಿಸಿದೆ. ರಾಜಕೀಯ ಮೇಲಾಟ ಹಾಗೂ ಜಾತೀಯ ವೈಷಮ್ಯಗಳು ಗ್ರಾಮದ ಅಭಿವೃದ್ಧಿಯ ಮುಂದೆ ಸವಾಲಾಗಿ ನಿಂತಿದೆ. ನಶೆ ಪದಾರ್ಥಗಳು, ಆನ್ ಲೈನ್ ಬೆಟ್ಟಿಂಗ್ ಗಳು ಹೊಸ ರೀತಿಯ ಸಂಕಟಗಳನ್ನು ತಂದಿವೆ. ಹಿಂದೆ ಗ್ರಾಮವೇ ನಿರ್ಣಯಿಸುತ್ತಿದ್ದ, ನಿರ್ವಹಿಸುತ್ತಿದ್ದ ಎಲ್ಲಾ ಕೆಲಸಕ್ಕೂ ಇಂದು ಸರಕಾರದ ಅನುಮತಿಗೆ ಕಾಯಬೇಕಾಗಿದೆ. ಸಾಮಾನ್ಯ ಕೆಲಸಕ್ಕೂ ಸರಕಾರವನ್ನು ಅವಲಂಬಿಸುವಂತಾಗಿದೆ
ಕಲಿಕಾ ಕೇಂದ್ರ ಈಗ 350 ಗ್ರಾಮಗಳಲ್ಲಿ ನಡೆಯುತ್ತಿದೆ. ಭವಿಷ್ಯದಲ್ಲಿ 1000 ಗ್ರಾಮ ತಲಪುವ ಯೋಜನೆ
ಮಹಿಳಾ ಸ್ವ-ಸಹಾಯ ಗುಂಪುಗಳು ಈಗ 150 ಮುಂದೆ 500 ಮಾಡುವ ಗುರಿ
ಅವಕಾಶ ವಂಚಿತ ಗ್ರಾಮೀಣ ಮಕ್ಕಳಿಗೆ ಉಚಿತ ವಿದ್ಯಾರ್ಥಿ ನಿಲಯ
ಕಾರ್ಯಕರ್ತರ ತರಬೇತಿಗಾಗಿ ಪ್ರಶಿಕ್ಷಣ ಕೇಂದ್ರ
ಯುವಕ ಯುವತಿಯರಿಗೆ ಸ್ವಉದ್ಯೋಗ ತರಬೇತಿ ಕೇಂದ್ರ
ಕೃಷಿಕರಿಗೆ - ಗಪ್ಪೋತ್ತನ್ನ ಹಾಗೂ ಸಾವಯವ ಕೃಷಿ ತರಬೇತಿ ಕೇಂದ್ರ
ಮೇಲ್ಕಂಡ ಚಟುವಟಿಕೆಗಳಿಗಾಗಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಹನೂರು ಹಾಗೂ ಹೊಳೆನರಸೀಪುರಗಳಲ್ಲಿ ಪ್ರಶಿಕ್ಷಣ ಭವನಗಳ ನಿರ್ಮಾಣ ಮಾಡುವ ಉದ್ದೇಶವಿದೆ..
ಲೋಕಸೇವಾ ಪ್ರತಿಷ್ಠಾನದ ಕಾರ್ಯಕ್ರಮಗಳು ಗ್ರಾಮಸ್ಥರ ಭಾಗವಹಿಸುವಿಕೆಯನ್ನು ಆಧಾರವಾಗಿಟ್ಟುಕೊಂಡಿವೆ. ನಾವು ಸಾಮಾನ್ಯವಾಗಿ ಶಿಕ್ಷಣದ ಮೂಲಕ ಗ್ರಾಮಕ್ಕೆ ಪ್ರವೇಶಿಸಿ, ನಂತರ ಆರೋಗ್ಯ, ಪರಿಸರ, ಸಂಸ್ಕೃತಿ, ಮತ್ತು ಜೀವನೋಪಾಯ ಕ್ಷೇತ್ರಗಳಿಗೆ ವಿಸ್ತರಿಸುತ್ತೇವೆ. ಸಮಸ್ಯೆಗಳನ್ನು ಗುರುತಿಸಿ, ಪರಿಹಾರಗಳನ್ನು ಚರ್ಚಿಸಿ, ಜಾರಿಗೆ ತರುವುದರಲ್ಲಿ ಗ್ರಾಮಸ್ಥರೇ ತೊಡಗಿಕೊಳ್ಳುವಂತೆ ಮಾಡುತ್ತೇವೆ.
ಕಲಿಕಾ ಕೇಂದ್ರಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣದ ಮಟ್ಟ ಹೆಚ್ಚಾಗಿದೆ.
22 ತಾಲೂಕುಗಳಲ್ಲಿ ಮಹಿಳೆಯರು ಮತ್ತು ಯುವಕರಿಗೆ ಕೌಶಲ್ಯ ತರಬೇತಿ ನೀಡಿದ ಪರಿಣಾಮ ಸ್ವಾವಲಂಬಿಗಳಾಗಿದ್ದಾರೆ.
ಸಾಂಪ್ರದಾಯಿಕ ಜ್ಞಾನ, ಕ್ರೀಡೆ ಮತ್ತು ಕಲೆಗಳನ್ನು ಪುನರುಜ್ಜೀವನಗೊಳಿಸಿದ ಕಾರಣ ಗ್ರಾಮಗಳಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗಿದೆ.
ವೃಕ್ಷಾರೋಪಣ, ನೀರಿನ ಮೂಲ ಸಂರಕ್ಷಣೆ ಹೀಗೆ ಪರಿಸರ ಚಟುವಟಿಕೆಗಳನ್ನು ಬಲಪಡಿಸಿದೆ
ಗ್ರಾಮಸ್ಥರ ನಾಯಕತ್ವ, ಜಾಗೃತಿ ಮತ್ತು ಭಾಗವಹಿಸುವಿಕೆಯನ್ನು ಹೆಚ್ಚಿಸಿದೆ
ಇದು ಗ್ರಾಮಗಳಲ್ಲಿ ಸ್ಥಿರ, ಜಾಗೃತ ಮತ್ತು ಆತ್ಮವಿಶ್ವಾಸದಿಂದಿರುವ ಸಮುದಾಯಗಳ ನಿರ್ಮಾಣಕ್ಕೆ ಕಾರಣವಾಗಿದೆ.
ಲೋಕಸೇವಾ ಪ್ರತಿಷ್ಠಾನವು ಗ್ರಾಮೀಣ ಭಾರತದ ಸಶಕ್ತೀಕರಣಕ್ಕೆ ಬದ್ಧವಾಗಿದೆ. ಪರಂಪರಾಗತ ಜ್ಞಾನ ಮತ್ತು ಆಧುನಿಕ ಅಭಿವೃದ್ಧಿ ನಡೆಗಳು ಒಂದಾಗುವ ಮೂಲಕ, ಸ್ವಾವಲಂಬಿ, ಸಂಸ್ಕೃತಿಪೂರ್ಣ ಮತ್ತು ಪರಿಸರಸ್ನೇಹಿ ಗ್ರಾಮಗಳ ನಿರ್ಮಾಣವೆಂಬ ಗುರಿಯ ದಿಕ್ಕಿನಲ್ಲಿ ನಾವು ಮುಂದುವರಿಯುತ್ತಿದ್ದೇವೆ.
ಕಲಿಕಾ ಕೇಂದ್ರಗಳು – ಮಕ್ಕಳಿಗೆ ಪಾಠಗಳ ಜೊತೆಗೆ ಮೌಲ್ಯಾಧಾರಿತ ಶಿಕ್ಷಣ
ಪುಸ್ತಕಾಲಯ, ಕಂಪ್ಯೂಟರ್ ಶಿಕ್ಷಣ, ಅಧ್ಯಯನ ಕೇಂದ್ರ (study Center) ಪ್ರಾರಂಭಿಸುವುದು.
ಬಾಲಗೊಕುಲ, ಸಾಂಪ್ರದಾಯಿಕ ಕ್ರೀಡೆಗಳು – ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ
ವರ್ಷಾರಂಭದಲ್ಲಿ ಶಾಲಾ ಸೇರ್ಪಡೆಗೆ ಸಹಕಾರ ಮಾಡುವುದು..
ವಿಶೇಷ ಕಾರ್ಯಕ್ರಮಗಳ ಆಯೋಜನೆ:- ಮಾತಾ ಪಿತೃ ವಂದನೆ, ಯೋಧ ವಂದನೆ, ಪ್ರಕೃತಿ ವಂದನೆ,
ಗ್ರಾಮಸ್ಥರಿಗೆ ಬ್ಯಾಂಕ್, ಕೋರ್ಟ್, ಪೋಲಿಸ್ ಠಾಣೆ ಹಾಗೂ ಗ್ರಾಮ ಪಂಚಾಯ್ತಿಯ ಕಾರ್ಯಗಳ ತಿಳುವಳಿಕೆ ನೀಡುವುದು.
ನಾಗರಿಕ ಕರ್ತವ್ಯ ಪಾಲನೆಯ ತಿಳಿವು ಮೂಡಿಸುವುದು
ಜನಪದ ನೃತ್ಯ, ಸಂಗೀತ, ಕ್ರೀಡೆ, ನಾಟಕ, ಹಸ್ತಕಲೆಗಳ ಸಂರಕ್ಷಣೆ ಹಾಗೂ ಸಂವರ್ಧನೆ
ಆರೋಗ್ಯ ತಪಾಸಣಾ ಶಿಬಿರಗಳು
ಪಾರಂಪರಿಕ ಔಷಧಿ ಜ್ಞಾನ ಸಂರಕ್ಷಣೆ ಹಾಗೂ ಪ್ರಚಾರ
ಔಷಧಿ ಸಸ್ಯ ತೋಟ
ಪ್ರಥಮ ಚಿಕಿತ್ಸೆ ತರಬೇತಿ
ಯೋಗ ಶಿಬಿರ
ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸುವುದು
ವ್ಯಸನ ಮುಕ್ತಿ ಶಿಬಿರ
ರಕ್ತದಾನ ಶಿಬಿರ ನಡೆಸುವುದು
ಆರೋಗ್ಯಮಿತ್ರ - ವಿವಿಧ ಪದ್ದತಿಯ ಸರಳ ಔಷಧಿಗಳ ಪ್ರಯೋಗ ಕಲಿಸುವುದು
ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸಹಕಾರ
ಆರೋಗ್ಯ ಸಂಬಂಧಿತ ಸರಕಾರಿ ಯೋಜನೆಗಳ ಲಾಭ ಲಭಿಸುವಂತೆ ಮಾಡುವುದು
ಕಿಶೋರಿ ಆಪ್ತಸಲಹೆ ನಡೆಸುವುದು
ಸಾವಯವ ಆಹಾರ ವಸ್ತುಗಳ ಬಳಕೆ ಮಾಡುವುದು
ಹೊಲಿಗೆ, ಎಂಬ್ರಾಯಿಡರಿ, ಹೆಣಿಗೆ, ನೇಯ್ಗೆ, ಮೆಹಂದಿ, ಬ್ಯುಟಿಷನ್
ಯಂತ್ರೋಪಕರಣಗಳ ದುರಸ್ತಿ, ಇಲೆಕ್ಟ್ರಿಷನ್, ಬೈಕ್ ರಿಪೇರಿ, ಮೊಬಾಯಿಲ್ ರಿಪೇರಿ, ಕೆಟರಿಂಗ್, ಸಲೂನ್, ಬೇಕರಿ,
ಕೋಳಿ, ಕುರಿ, ಮೇಕೆ, ಜೇನು, ಮೀನು ಸಾಕಣೆ, ಅಣಬೆ ಕೃಷಿ, ನರ್ಸರಿ ಹಾಗೂ ಕಸಿ ಶಿಕ್ಷಣ
ತಟ್ಟೆ , ದೊನ್ನೆ, ಚಾಪೆ, ಹಗ್ಗ, ಗೊಂಬೆ, ಆಟಿಕೆ, ಹಾರ ತಯಾರಿಕೆ
ಅಲೋವೆರಾ ಮೊದಲಾದ ಔಷಧೀಯ ಸಸ್ಯಗಳ ಕೃಷಿ ಹಾಗೂ ಮಾರಾಟ
ಸಾಬೂನು ಫಿನಾಯಿಲ್ ಉಪ್ಪಿನಕಾಯಿ, ಮೊರಬ್ಬ, ಹಪ್ಪಳ, ಮಸಾಲೆ, ಹಿಟ್ಟು ಮುಂತಾದ ದಿನಬಳಕೆ ವಸ್ತು ತಯಾರಿ ತರಬೇತಿ
ಗಾಣದ ಎಣ್ಣೆ ಹಾಲಿನ ಉತ್ಪನ್ನಗಳು ಗೋವಿನ ಉತ್ಪನ್ನಗಳು – ದಂತಮಂಜನ ದೀಪ ಸೊಳ್ಳೆಬತ್ತಿ ಅರ್ಕ ಬೆರಣಿ
ಸರಕಾರೀ ಯೋಜನೆಗಳ ಅರಿವು ಹಾಗೂ ಉದ್ಯೋಗ ಮಾಹಿತಿ ನೀಡುವುದು
ಸ್ಟ – ಸಹಾಯ ಸಂಘಗಳನ್ನು ನಡೆಸುವುದು
ಮೌಲ್ಯವರ್ಧನೆ ಕಲಿಸುವುದು.
ಗ್ರಾಮದ ಅರಣ್ಯ, ಕೆರೆ,ಗೋಮಾಳ, ಸಾರ್ವಜನಿಕ ಜಾಗಗಳು ಅತಿಕ್ರಮಣಕ್ಕೆ ತುತ್ತಾಗದಂತೆ ನೋಡುವುದು
ಮಹಿಳೆಯರಿಗೆ ಯುವತಿಯರಿಗೆ ಸ್ವರಕ್ಷಾ ತರಬೇತಿ ನೀಡುವುದು
ಯುವಕರಿಗಾಗಿ ಕ್ರೀಡಾಕೇಂದ್ರ, ವ್ಯಾಯಾಮಶಾಲೆ, ಜಿಮ್, ಕುಸ್ತಿ, ಅಖಾಡ,
ಆಟೋಟ ಸ್ಪರ್ಧೆಗಳು, ಶ್ರಮದಾನ, ಸಾಹಸ ಕ್ರೀಡೆಗಳು,
ಅವಘಢ ನಿರ್ವಹಣೆಯ ತರಬೇತಿ ನೀಡುವುದು
ಗ್ರಾಮ ಚಿಂತನಾ ಸಭೆಗಳ ಆಯೋಜನೆ
ಮಂದಿರ, ಸ್ಮಶಾನ, ನೀರು, ಹೋಟೆಲ್, ಗಿರಣಿ, ಸಲೂನ್ ಮುಂತಾದ ಸಾರ್ವಜನಿಕ ಜಾಗಗಳಲ್ಲಿ ಮುಕ್ತ ಪ್ರವೇಶ
ಎಲ್ಲಾ ಮಹಾಪುರುಷರ ಜಯಂತಿಗಳನ್ನು ಒಟ್ಟಿಗೆ ಸೇರಿ ಆಚರಿಸುವುದು
ಸಾಮೂಹಿಕ ಆರತಿ, ರಕ್ಷಾ ಬಂಧನ, ಸಹಭೋಜನ, ಕನ್ಯಾ ಪೂಜೆ, ಗ್ರಾಮ ಗೌರವ ಕಾರ್ಯಕ್ರಮ, ಗ್ರಾಮೀಣ ಕ್ರೀಡಾಕೂಟ, ಗ್ರಾಮೋತ್ಸವ, ಹೋಲಿ, ದೀಪಾವಳಿಗಳನ್ನು ಎಲ್ಲಾ ಸಮಾಜದವರು ಸೇರಿ ಆಚರಿಸುವುದು.
ಮಹಾಪುರುಷರ ಪ್ರತಿಮೆಗಳ ಸ್ವಚ್ಛತೆ ಅಲಂಕಾರ ಗೌರವಾರ್ಪಣೆ ಯನ್ನು ಎಲ್ಲಾ ಸಮಾಜದವರು ಕೂಡಿ ಮಾಡುವುದು.
ಜಲ ಜಾಗೃತಿ ಕಾರ್ಯಕ್ರಮಗಳು
ರಾಸಾಯಿನಿಕ ರಹಿತ ಪೇಸ್ಟ್, ಶಾಂಪೂ, ಸಾಬೂನು ಫಿನಾಯಿಲ್ ಹಾಗೂ ಸೌಂದರ್ಯ ಸಾಧನಗಳ ಬಳಕೆ ಬಗ್ಗೆ ತಿಳುವಳಿಕೆ
ವೃಕ್ಷಾರೋಪಣ ಹಾಗೂ ಸಂವರ್ಧನೆ-
ಪ್ಲಾಸ್ಟಿಕ್ ಮಿತಬಳಕೆ ಕಸ ನಿರ್ವಹಣೆ
ಸ್ಟೀಲಿನ ತಟ್ಟೆ ಲೋಟ ಬ್ಯಾಂಕ್ - ಪ್ಲಾಸ್ಟಿಕ್ ಮುಕ್ತ ಸಭೆ ಸಮಾರಂಭ ಸಂತೆ ಜಾತ್ರೆ ಉತ್ಸವಗಳು
ಗೋಬರ್ ಗ್ಯಾಸ್ ಹಾಗೂ ಸೌರ ಶಕ್ತಿ ಬಳಕೆ – ವಿದ್ಯುತ್ ಉಳಿತಾಯ
ಧ್ವನಿವರ್ಧಕ ಬಳಕೆಯ ನಿಯಮ ಪಾಲನೆ ಮಾಡುವುದು.
ಕಾಲಕಾಲಕ್ಕೆ ಗ್ರಾಮದ ರಸ್ತೆ, ಕೆರೆ, ಶಾಲೆ, ಮುಂದಿರ, ಸ್ಮಶಾನಗಳ ಸ್ವಚ್ಛತೆ ಹಾಗೂ ಸುಂದರೀಕರಣ.
ಸಾವಯವ ಕೃಷಿಯ ಅವಶ್ಯಕತೆ ಬಗ್ಗೆ ಜನ ಜಾಗೃತಿ ಮೂಡಿಸುವುದು.
ಜೀವಾಮೃತ,ಬೀಜಾಮೃತ, ಗೋಕೃಪಾಮೃತ, ಜೈವಿಕಕೀಟ ನಿಯಂತ್ರಕ,ಸಾವಯವ ಗೊಬ್ಬರಗಳು ಬೆಳವಣಿಗೆ ವರ್ಧಕಗಳು (growth Pramoter), ಪಂಚಗವ್ಯ ಔಷಧಿ ಮೊದಲಾದವುಗಳ ತಯಾರಿಕಾ ವಿಧಾನವನ್ನು ಕಲಿಸುವುದು.
ಆಹಾರ ಸಂರಕ್ಷಣೆ – ಮಣ್ಣು ಪರೀಕ್ಷೆ – ದೇಸೀ ಬೀಜ ಸಂಗ್ರಹಣೆ, ಸಂರಕ್ಷಣೆಯ ಪಾರಂಪರಿಕ ಹಾಗೂ ನೂತನ ವಿಧಾನಗಳನ್ನ ಕಲಿಸುವುದು.
ಕೃಷಿ ಕಾರ್ಮಿಕರ ಕೊರತೆ ಇರುವಲ್ಲಿ ಸಮುದಾಯ ಕೃಷಿ ಮಾಡುವುದು ಹಾಗೂ ಹಸ್ತ ಚಾಲಿತ ಹಾಗೂ ಪಶುಚಾಲಿತ ಯಂತ್ರೋಪಕರಣಗಳ ಉಪಯೋಗ ಮತ್ತು ಕೃಷಿ ಉಪಕರಣಗಳ ಮಾಹಿತಿ
ಮೌಲ್ಯವರ್ಧನೆ - ಮಾರುಕಟ್ಟೆ - FPO ಗಳ ತರಬೇತಿ ನೀಡುವುದು.
ವಿಷಮುಕ್ತ ಅಡುಗೆಮನೆ ಹಾಗೂ ಕೈತೋಟವನ್ನು ವ್ಯಾಪಕಗೊಳಿಸುವುದು.
ಮಕ್ಕಳಲ್ಲಿ ಕೃಷಿ ಹಾಗೂ ಗೋವಿನ ಕುರಿತಾಗಿ ಆಸಕ್ತಿ ಮೂಡಿಸುವ ವಿಶೇಷ ಕಾರ್ಯಕ್ರಮಗಳ ಯೋಜನೆ ಮಾಡುವುದು.
ಅನಾಥ ಹಸುಗಳಿಗೆ ವ್ಯವಸ್ಥೆ ಗವ್ಯೋತ್ಪನ್ನ ತರಬೇತಿ ಪಶು ಚಿಕಿತ್ಸಾ ತರಬೇತಿ
Stay connected with us as we walk alongside villages on their journey of hope, learning, and self-reliance. Every update is a story of lives touched, communities strengthened, and futures being rebuilt—together.